Monday 27 April 2015

ಕಾರ್ನೇಲಿಯಾ ಸೊರಾಬ್ಜಿ

                                                     ನಾಸಿಕ್‍ನ ರೆವರೆಂಡ್ ಸೊರಾಬ್ಜಿ ಮತ್ತು  ಫೋರ್ಡ್ ಎಂಬ ದಂಪತಿಗಳಿಗೆ 15-11-1866 ರಲ್ಲಿ ಒಂದು ಹೆಣ್ಣುಮಗುವು ಜನಿಸಿದಾಗ , ಆ ಮಗುವು  ಭಾರತದ ಇತಿಹಾಸದಲ್ಲಿ ದಾಖಲೆಗಳನ್ನು ಸಾಧಿಸುವುದೆಂದು ಯಾರೂ ನಿರೀಕ್ಷಿಸಿರಲಿಲ್ಲ . ತಮ್ಮ 9 ಮಕ್ಕಳ ಪೈಕಿ ಒಬ್ಬಳಾದ ಆಕೆಗೆ ಕಾರ್ನೇಲಿಯಾ ಸೊರಾಬ್ಜಿ ಎಂದು ಕರೆದರು . ಚೆಲುವೆಯೂ ಬುದ್ಧಿವಂತೆಯೂ ಆಗಿದ್ದ ಆಕೆ ಓದಿನಲ್ಲಿಯೂ  ಮುಂದಿದ್ದಳು .ಬಾಂಬೆ ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಪದವೀಧರೆಯಾದ ಆಕೆಯು 1899ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ತೇರ್ಗಡೆ ಹೊಂದಿದ ಪ್ರಥಮ ಮಹಿಳಾ ಕಾನೂನು ವಿದ್ಯಾರ್ಥಿನಿಯಾಗಿದ್ದಳು . ಮತ್ತು ಯಾವುದೇ ವಿದೇಶೀ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದ ಪ್ರಥಮ ಭಾರತೀಯ  ವಿದ್ಯಾರ್ಥಿಯಾಗಿದ್ದಳು .
         ನಂತರ , ಭಾರತ ಮತ್ತು ಬ್ರಿಟನ್ನಿನಲ್ಲಿ ಕಾನೂನನ್ನು ವೃತ್ತಿಯಾಗಿಸಿದ ಮೊಟ್ಟ ಮೊದಲ ವಕೀಲಳಾಗಿದ್ದಳು . ಅವಳ ಈ ಎಲ್ಲಾ ವಿಕ್ರಮಗಳನ್ನು ಪರಿಗಣಿಸಿ ಲಂಡನ್ನಿನ ಲಿಂಕನ್ಸ್ –ಇನ್‍ನಲ್ಲಿ ಆಕೆಯ ಪ್ರತಿಮೆಯನ್ನು 2012ರಲ್ಲಿ ಅನಾವರಣಗೊಳಿಸಲಾಯಿತು . 1894 ರಲ್ಲಿ ಆಕೆಯು ಭಾರತಕ್ಕೆ ಮರಳಿದ ನಂತರ ಭಾರತದಲ್ಲಿದ್ದ ಪರ್ದಾನಶೀನ್ ಹಿಂದೂ ಮಹಿಳೆಯರ ಪರವಾಗಿ ಕಾನೂನೀ ಸಲಹೆಯನ್ನು ನೀಡುವ ಸಾಮಾಜಿಕ ಕಾರ್ಯಕರ್ತೆಯಾಗಿ ಆಕೆ ತೊಡಗಿಸಿಕೊಂಡಳು . ಆ ಮಹಿಳೆಯರು ಅತ್ಯಂತ ಸಂಪನ್ಮೂಲಗಳಿಂದ ಕೂಡಿದ ಆಸ್ತಿಗಳಿಗೆ ಒಡತಿಯರಾಗಿದ್ದರು . ಆ ಆಸ್ತಿಗಳ ವ್ಯಾಜ್ಯದಲ್ಲಿ ಅಗತ್ಯವಾದ ಕಾನೂನೀ ನೆರವನ್ನು ಪಡೆಯಲು ಅವರಿಗೆ ಯಾವುದೇ ಅವಕಾಶವಿರಲಿಲ್ಲ . ಕಾಥೇವಾಡ ಮತ್ತು ಇಂದೂರು ಪ್ರಾಂತ್ಯಗಳ ಬ್ರಿಟಿಷ್ ಏಜೆಂಟರ ಸಮ್ಮುಖದಲ್ಲಿ ಈ ಪರ್ದಾನಶೀನ್ ಮಹಿಳೆಯರ ಪರವಾಗಿ ವಾದಿಸಲು ಆಕೆಗೆ ವಿಶೇಷ ಅನುಮತಿಯನ್ನು ನೀಡಲಾಗಿತ್ತು . ಆದರೆ , ಅವರ ಪರವಾಗಿ ಆಕೆಯು ನ್ಯಾಯಾಲಯದಲ್ಲಿ ವಾದಿಸಲು ಅವಕಾಶವಿರಲಿಲ್ಲ . ಏಕೆಂದರೆ , ಆಕೆಯ ಮಹಿಳೆಯಾಗಿದ್ದು , ಭಾರತೀಯ ಕಾನೂನೀ ವ್ಯವಸ್ಥೆಯಲ್ಲಿ ವೃತ್ತಿಪರ ಸ್ಥಾನಮಾನವನ್ನು ಆಕೆಗೆ ನಿರಾಕರಿಸಲಾಗಿತ್ತು . ಈ ಪ್ರತಿಕೂಲ ಅಂಶವನ್ನು ನಿವಾರಿಸುವ ಸಲುವಾಗಿ ಕಾರ್ನೇಲಿಯಾ ಸೊರಾಬ್ಜಿಯು 1897ನೇ ಇಸವಿಯಲ್ಲಿ ಬಾಂಬೆ ವಿಶ್ವವಿದ್ಯಾಲಯದ ಎಲ್ ಎಲ್ ಬಿ ಪರೀಕ್ಷೆಯಲ್ಲಿ ತೇರ್ಗಡೆಯಾದಳು. ಮತ್ತು 1899ನೇ ಇಸವಿಯಲ್ಲಿ ಆಕೆಯು ಅಲಹಾಬಾದ್ ಉಚ್ಚನ್ಯಾಯಾಲಯದ ಪ್ಲೀಡರ್ ಪರೀಕ್ಷೆಯಲ್ಲಿ ಕೂಡಾ ತೇರ್ಗಡೆ ಹೊಂದಿದಳು. ಆಕೆ ಎಷ್ಟೇ ಪರೀಕ್ಷೆಗಳಲ್ಲಿ  ಉತ್ತೀರ್ಣಳಾದರೂ  ಕೂಡಾ ಆಕೆಯನ್ನು 1924ನೇ ಇಸವಿಯವರೆಗೆ ವಕೀಲಳೆಂದು ಪರಿಗಣಿಸಲೇ ಇಲ್ಲ .
         ಮಹಿಳೆಯು ವಕೀಲವೃತ್ತಿಯಲ್ಲಿ  ತೊಡಗಿಸಿಕೊಳ್ಳುವುದನ್ನು ಕಾಯಿದೆಯನ್ನು  1924ರಲ್ಲಿ ಬದಲಾವಣೆಯಾಯಿತು . ನಂತರವೇ ಆಕೆಯು ವಕೀಲರ ಸನ್ನದನ್ನು ಪಡೆಯಲು ಸಾಧ್ಯವಾಯಿತು. ಕಾರ್ನೇಲಿಯಾ   1902ನೇ ಇಸವಿಯಿಂದಲೇ ಇಂಡಿಯಾ ಆಫೀಸಿನಲ್ಲಿ  ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕ ಮಕ್ಕಳನ್ನು ಪ್ರತಿನಿಧಿಸುವ ಸಲುವಾಗಿ ಮಹಿಳಾ ಕಾನೂನು ಸಲಹೆಗಾರರನ್ನು ನೇಮಿಸುವಂತೆ ಕೋರಿ ಅರ್ಜಿಯ ಮೇಲೆ ಅರ್ಜಿಯನ್ನು ಗುಜರಾಯಿಸತೊಡಗಿದಳು .         ಆಅರ್ಜಿಗಳಿಗೆ ಉತ್ತರವೋ ಎಂಬಂತೆ 1904ರಲ್ಲಿ ಬಂಗಾಳದ ಕೋರ್ಟ್ ಆಫ್ ವಾಡ್ರ್ಸ್‍ಗೆ ಆಕೆಯನ್ನು ಮಹಿಳಾ ಸಹಾಯಕಿಯಾಗಿ ನೇಮಕ ಮಾಡಲಾಯಿತು . 1907ರ ಇಸವಿಯ ಹೊತ್ತಿಗೆ ಆರೀತಿಯ ಪ್ರಾತಿನಿಧ್ಯತೆಗೆ ವಿಶೇಷ ಬೇಡಿಕೆಯು ಬರಲಾರಂಭಿಸಿದ್ದರಿಂದ ಆಕೆಯು ಬಂಗಾಳ, ಬಿಹಾರ ,ಒರಿಸ್ಸ ಮತ್ತು ಅಸ್ಸಾಮ್ ಪ್ರಂತ್ಯಗಳಲ್ಲಿ ಕೆಲಸವನ್ನು ನಿರ್ವಹಿಸಲಾರಮಭಿಸಿದಳು . ಆಕೆಯ 20 ವರ್ಷದ ಸೇವಾವಧಿಯಲ್ಲಿ ಆಕೆಯು ಸುಮಾರು 600 ಪ್ರಕರಣಗಳಲ್ಲಿ ಮಹಿಳೆಯರು ಮತ್ತು ಅನಾಥ ಹಾಗೈ ಅಪ್ರಾಪ್ತ ವಯಸ್ಕ ಮಕ್ಕಳ ಕಾನೂನೀ ಹೋರಾಟವನ್ನು ಮಾಡಿದ್ದು , ನ್ಯಾಯ   ಅಂದಾಜಿಸ.
 ಆಕೆಯು ವಕೀಲಳು ಮಾತ್ರವಲ್ಲದೆ ಉತ್ತಮ ಬರಹಗಾರ್ತಿಯು ಕೂಡಾ ಆಗಿದ್ದಳು . ಆಕೆಯು ತನ್ನ ಸಾಮಾಜಿಕ ಅನಿಭವಗಳನ್ನು ‘ ಬಿಟ್ವೀನ್ ದ ಟ್ವೈಲೈಟ್ಸ್ ’ ಎಂಬ ಅನುಭವ ಅಥನದ ಮೂಲಕ ದಾಖಲಿಸಿದ್ದಾಳೆ . ಆಕೆಯು ತನ್ನ ಆತ್ಮ ಕಥಾ  1924ನೇ ಇಸವಿಯಲ್ಲಿ ಕಾನೂನು ಕ್ಷೇತ್ರವು ಮಹಿಳೆಯರಿಗೆ ತನ್ನ ಹೆಬ್ಬಾಗಿಲನ್ನು ತೆರೆಯಿತು . ಈ ಸುಸಂದರ್ಭಕ್ಕಾಗಿ ಕಾಯುತ್ತಿದ್ದ ಕಾರ್ನೇಲಿಯಾ   ಕಲಕತ್ತೆಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದಳು . ಆದರೆ ಮಹಿಳಾ ವಕೀಲರ ವಿರುದ್ಧ  ಪುರುóಆಧಿಕಾರದ ಪೂರ್ವಾಗ್ರಹಗಳು ಹಾಗೂ ತಾರತಮ್ಯದ ಮತ್ತು ಅಸಹಾಕಾರದ ದೆಸೆಯಿಂದ ಆಕೆಯು ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುವುದಕ್ಕೆ ಬದಲಾಗೀ ಕಾನೂನೀ ಅಭಿಪ್ರಾಯಗಳನ್ನು ನೀಡುವುದರತ್ತ ಮಾತ್ರ ಆಕೆ  ಮೀಸಲಾಗಬೇಕಾಯಿತು .
    ಆಕೆಯು ಉಚ್ಚ ನ್ಯಾಯಾಲಯದ ವಕೀಲ ವೃತ್ತಿಯಿಂದ 1929ರಲ್ಲಿ ನಿವೃತ್ತಿಯನ್ನು ಹೊಂದಿದಳು ಹಾಗೂ ಲಂಡನ್ನಿನಲ್ಲಿ ನೆಲಸಿದಳು .ಆಕೆಯು 88 ವರ್ಷಗಳ ಕಾಲ ಕ್ರಿಯಾತ್ಮಕ ಬದುಕನ್ನು ನಡೆಸಿ ,ಲಂಡನ್ನಿನ ತನ್ನ ನಿವಾಸದಲ್ಲಿ ಮರಣ ಹೊಂದಿದಳು . ಕಾ ಸಮಾಜ ಸುದಾರಣೆಯತ್ತ ಕೂಡಾ ಅಪಾರ ಒಲವನ್ನು ಹೊಂದಿದ್ದಳು . ಆಕೆಯು ಭಾರತದ ನ್ಯಾಷನಲ್ ಕೌನ್ಸಿಲ್ ಫಾರ್ ವಿಮೆನ್ ಸಂಸ್ಥೆಯ ಬಂಗಾಳದ ಶಾಖೆಯೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿದ್ದಳು .ಹಾಗೂ  ಅಸೋಸಿಯೇಷನ್ ಆಫ್ ಯೂನಿವರ್ಸಿಟಿ ವಿಮೆನ್ ಮತ್ತು ಬೆಂಗಾಲ್  ಸೋಷಿಯಲ್ ಸರ್ವಿಸ್ ಫಾರ್ ವಿಮೆನ್ ಸಂಸ್ಥೆಗಲು ಕೂಡಾ ಆಕೆಯ ಆಸಕ್ತಿಯ ಇನ್ನಿತರೆ ಕ್ಷೇತ್ರಗಲಾಗಿದ್ದವು . ದೇಶಕ್ಕಾಗಿ ಆಕೆಯು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸರ್ಕಾರವು  1909ರಲ್ಲಿ ಖೈಸರ್-ಎ-ಹಿಂದ್ ಪುರಸ್ಕಾರ ಹಾಗೂ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು . ಪಾರ್ಸಿ ಕ್ರಿಶ್ಚಿಯನ್ ತಂದೆ ಹಾಗೂ ಭಾರತೀಯ ಕ್ರೈಸ್ತ ತಾಯಿಯ ಕುಟುಂಬದ ಕುಡಿಯಾಗಿದ್ದ  ಆಕೆಯ ಶಿಕ್ಷಣ  ಮತ್ತು ಸಂಸ್ಕಾರವು ಸಹಜವಾಗಿಯೇ  ಆಂಗ್ಲ ರೀತಿ -ನೀತಿಗಳಿಂದ ಪ್ರಭಾವಿತವಾಗಿ ತ್ತು  ಆದರೂ ಕೂಡಾ ಆಕೆಯು ಸಂಪೂರ್ಣ  ಬ್ರಿಟಿಷ್  ಕಾನೂನೀ ವ್ಯವಸ್ಥೆಯನ್ನು ಸಾರಾಸಗಟಾಗಿ ಭಾರತೀಯ ಸಮಾಜದ ಮೇಲೆ ಹೇರುವುದನ್ನು ವಿರೋಧಿಸುತ್ತಿದ್ದಳು .ಆಕೆಯು ಪರಂಪರಾಗತ ಭಾರತೀಯ ಜೀವನ ಕ್ರಮ ಮೌಲ್ಯಮತ್ತು ಸಂಪ್ರದಾಯಗಳನ್ನು  ಬೆಂಬಲಿಸುತ್ತಿದ್ದರೂ ಆಕೆಯು ಹಿಂದೂ ಧಾರ್ಮಿಕ ವ್ಯವಸ್ಥೆಯಲ್ಲಿ ಬಾಲ್ಯವಿವಾಹ ಹಾಗೂ ವಿಧವೆಯರ ಪರಿಸ್ಥಿತಿಯ ಬಗ್ಗೆ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ವಿಷೇಶವಾಗಿ ಕ್ರಿಯಾಶೀಲಳಾಗಿದ್ದಳು .   ಆ ಹೊತ್ತಿನ ಸಮಾಜ ಸುಧಾರಕಿಯಾಗಿದ್ದ ಪಂಡಿತಾ ರಮಾಬಾಯಿಯ ಜೊತೆಗೂಡಿ ಆಕೆಯು ತನ್ನ ಕಾರ್ಯಕ್ಷೇತ್ರವನ್ನು ಹಮ್ಮಿಕೊಂಡಿದ್ದಳು. ಸಾಮಾಜಿಕ ಬದಲಾವಣೆಯ ತಾಯಿ ಬೇರು ವಿದ್ಯಾಭ್ಯಾಸ ವೆಂಬುದನ್ನು ಮನಗಂಡಿದ್ದ ಆಕೆಯು ಮಹಿಳೆಯರಲ್ಲಿ ವಿದ್ಯಾಭ್ಯಾಸವನ್ನು ಹರಡಲು ಶ್ರಮವಹಿಸಿದ್ದಳು
   ಆದರೆ , ಆಕೆಯ ರಾಜಕೀಯ ನಿಲುವುಗಳು 1920ರಲ್ಲಿ ಸಾಕಷ್ಟು ಬದಲಾವಣೆಯನ್ನು ಕಂಡಿದ್ದವು  ಆಕೆಯು ಭಾರತೀಯ ರಾಷ್ಟ್ರೀಯ ಚಳುವಳಿಗಿಂತ ಭಿನ್ನವಾಗಿ ವಸಾಹತುಶಾಹಿ ಬ್ರಿಟಿಷ್ ರಾಜ್ ವ್ಯವಸ್ಥೆಯನ್ನು ಬೆಂಬಲಿಸುವ ನಿಲುವನ್ನು ತಳೆದಿದ್ದಳು ಹಾಗೂ ಮಹಾತ್ಮ ಗಾಂಧಿಯವರ ಹೋರಾಟದ ಧೋರಣೆಗಳಿಗೆ ವಿರುದ್ಧವಾದ ನಿಲುವನನು ತಳೆದಿದ್ದಳು . ನಂತರ ಆಕೆಯು ಬಾರತ ಮತ್ತು ಅಮೆರಿಕದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ ತನ್ನ ರಾಜಕೀಯ ನಿಲುವುಗಳನ್ನ ಪ್ರಚಾರ ಮಾಡಿದಳು . ಈ ರಾಜಕೀಯ ಚಿಂತನೆಯ ದೆಸೆಯಿಂದ, ನಂತರದ ಕಾಲಾವಧಿಯಲ್ಲಿ ಆಕೆಯು ಭಾರತೀಯ ಸಾಮಾಜಿಕ ಹಾಗೂ ರಾಜಕೀಯ ಹೋರಾಟದ ಪ್ರಮುಖ ಧಾರೆಯಿಂದ ಅಂತರವನ್ನು ಕಾಪಾಡಿಕೊಳ್ಳಬೇಕಾಯಿತು . 
    ಕಾರ್ನೇಲಿಯಾ ಸೊರಾಬ್ಜಿಯು ಪುರುಷ ಪ್ರಾಧಾನ್ಯತೆಯ ಪೂವಾಗ್ರಹಗಳನ್ನು ಹಾಗೂ ತಾರತಮ್ಯಗಳನ್ನು ದಿಟ್ಟತನದಿಂದ ಎದುರಿಸಿದ ಮಹಿಳೆ . ಮಹಿಳೆಯರಿಗೆ ನಿಷೇಧಿತವಾಗಿದ್ದ ಕಾನೂನು ಕ್ಷೇತ್ರದ ವಲಯವನ್ನು ಮುಂದಿನ ಪೀಳಿಗೆಯ ಮಹಿಳೆಯರಿಗೆ ಮುಕ್ತಗೊಳಿಸಿದ ಹಿರಿಮೆ ಆಕೆಯದಾಗಿದೆ . ಕಾನೂನೀ ಕ್ಷೇತ್ರದಲ್ಲಿ ಮಹಿಳೆಯರು ಸ್ವಾಭಿಮಾನದಿಂದ ತೊಡಗಿಸಿಕೊಳ್ಳಲು ಹಾದಿಯನ್ನು ಸುಗಮಗೊಳಿಸಿದ ಕಾರ್ನೇಲಿಯಾ ಸೊರಾಬ್ಜಿಯನ್ನು ಅಸೀಮ ಧೈರ್ಯದ ಪ್ರತೀಕವಾಗಿ ಅವಿರತ ಶ್ರಮದ ಸಂಕೇತವಾಗಿ ಮತ್ತು ವಿಶಾಲ ದಿಗಂತದ ಸಾಮಾಜಿಕ ಹೋರಾಟಗಾರ್ತಿಯಾಗಿ ಮತ್ತು ಸಂವೇದನಾಶೀಲ ಬರಹಗಾರ್ತಿಯಾಗಿ ನಾವು ಇಂದು ಕಾಣ ಬೇಕಿದೆ .
    ಮಹಿಳಾ ವಕೀಲರ ರಾಜ್ಯ ಸಮಾವೇಶದ ಈ ಸಂದರ್ಭದಲ್ಲಿ ನೆನಪಿನ ಗೌರವದ ಕಾಣಿಕೆಯನ್ನು ಸಲ್ಲಿಸಲೇ ಬೇಕಾದ ಹೋರಾಟದ ಚೈತನ್ಯದ ಕಿಡಿಯಾದ ಕಾರ್ನೇಲಿಯಾ ಸೊರಾಬ್ಜಿಯ ನೆನಪಿಗೆ ಒಂದು ಪುಟ್ಟ ಗುಲಾಬಿ .
                     *********
            

    
   




No comments:

Post a Comment