Monday 4 August 2014

ಬಾನು ಮುಶ್ತಾಕ್ ಇವರ ಎರಡು ಪುಸ್ತಕಗಳು

                                                   photo : alissa harway
             
                         ವಿಮರ್ಶೆ
                  ಡಾ|| ರಾಜೇಗೌಡ ಹೊಸಹಳ್ಳಿ
                   413, ಒಂದನೇತಿರುವು, ಟೀಚರ್ಸ್ ಕಾಲನಿ,
                  ನಾಗರಭಾವಿ, ಬೆಂಗಳೂರು - 72
                       ಮೊಬೈಲ್ : 9980066070
     ‘ಬಡವರಮಗಳುಹೆಣ್ಣಲ್ಲ’ (2012) ಈ ಪುಸ್ತಕ ಕುರಿತು ಲೇಖಕಿ ತನ್ನ ಕಥಾಸಂಕಲನಕ್ಕೆ ಪ್ರಸ್ತಾವನೆ ಬರೆಯುತ್ತ ಎಮರ್ಜೆನ್ಸಿ ವಾರ್ಡ್‍ನಲ್ಲಿ ಕೊನೆಗಾಲದಲ್ಲಿದ್ದ ಹೆಣ್ಣೊಬ್ಬಳು ತನ್ನ ಕಾವ್ಯದ ಮೂಲಕ ತನ್ನ ಬದುಕಿನ ಸಮಗ್ರತೆಯನ್ನು ಕಂಡುಕೊಂಡ ಬಗೆಯನ್ನು ಅಕ್ಷರವು ಅದರಲ್ಲೂ ಹೆಣ್ಣಿನ ಎದೆಗೆ ಬಿದ್ದ ಅಕ್ಷರವು ಏನೆಲ್ಲಾ ಆಸೆ ಆಕಾಂಕ್ಷೆ ಸಾಮಾಜಿಕರಣದ ಹಂಬಲ ಹೊಂದಿರುತ್ತದೆಂದು ರೂಪಕಾತ್ಮವಾಗಿ ತಮ್ಮ ಬರವಣಿಗೆಯಲ್ಲಿ ಹೇಳುತ್ತಾರೆ. ಪುಸ್ತಕ ಮುಸ್ಲಿಂ ಸಮಾಜದ ಅದರಲ್ಲೂ ಹೆಣ್ಣಿನ ಬಗ್ಗೆ ಇರುವ ಅಪತಿಳಿವಳಿಕೆಯನ್ನು ತಿದ್ದುವಕಾರ್ಯ ಮಾಡುತ್ತದೆ.
    ಈ ಪುಸ್ತಕದ ಶೀರ್ಷಿಕೆಯ ಕಥಾ ನಾಯಕಿ ಬಡವರ ಮಗಳು ಬೇಲಿಮ್ಯಾಗಳ ಹೂವು; ಬಡವರ ಹೆಂಡ್ತಿ ಊರಿಗೆಲ್ಲಾ ಅತ್ತಿಗೆ ಎಂಬ ಗಾದೆಗಳಂತೆ.ಶ್ರಮಜೀವಿ ಜಟಕಾ ಸಾಬುವಿನ ತಂಗಿ ಬೀಡಿ ಸಾಹುಕಾರ ಉಸ್ಮಾನ್ ಸಾಹೇಬರ ಮಗ .ಇವನು ಪ್ರೇಮಿಸಿದರೂ ಹೇಡಿಯಾಗುಳಿದ ಮಗನನ್ನು ಪ್ರೀತಿಸಿ ಅವಹೇಳನಗೊಳ್ಳುತ್ತಾಳೆ, ತಲಾಕ್ ಎಂಬ ಮೂಲ ಧ್ಯೇಯವನ್ನುತಿರುಚುವಧರ್ಮ ಭಂಗಿಗಳ ಬಿಗಿಮುಷ್ಟಿಯಲ್ಲಿ ಸಿಕ್ಕಿ ಕಥೆಯಕಡೆಯಲ್ಲಿಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.ಗಂಡು ಸಮಾಜ ಎತ್ತ ಬೇಕಾದರೂ ತಿರುಗಬಹುದು. ಇದಕ್ಕೆ ಯಾವ ಧರ್ಮವೂ ಹೊರತಲ್ಲ. ಹೆಣ್ಣಾಗಿ ಹುಟ್ಟಬಾರದು ಅದರಲ್ಲೂ ಬಡವರ ಮನೆಯ ಹೆಣ್ಣಾಗಿ ಹುಟ್ಟಬಾರದು ಎಂಬ ಜಗದ ಸತ್ಯವನ್ನು ಲೇಖಕಿ ತಮ್ಮ ಬರಹಗಳಲ್ಲಿ ಬಿತ್ತರಿಸುವಾಗ ಭಾನು ಅವರ ಮತ್ತೊಂದು ಕಥೆ ಇಲ್ಲಿ ನೆನಪಾಗುವುದುಂಟು. ‘ಗುಸ್ಸಾಲಿನಾ’ ಇಂತದು ಒಂದು ಕತೆ. ಸುರಿಯುತ್ತಿರುವ ಮಳೆ, ಹರಿಯುತ್ತಿರುವ ಕೊಳಚೆಹಳ್ಳ, ಬಾಣಂತನದ ಹಸಿವಿನ ಮಗಳು, ಬಾಣಂತಿಯ ತಾಯಿಯು ಹೆಣ ಒಪ್ಪ ಮಾಡಿ ಊಟ ಬಟ್ಟೆ ತರುವ ಕಾಯಕದವಳು.ಆ ದಿನ ಸಾವಿನ ಸುದ್ದಿಗಾಗಿ ಹಾತೊರೆಯುತ್ತಿದ್ದಾಳೆ. ಇದೆಂತಹ ಬಡತನದ ಹೆಣ್ಣಿನ ಬದುಕು!
    ಪಾಕಿಸ್ತಾನದ ಪುಟ್ಟ ಹುಡುಗಿ ಮಲಾಲ ಹೃದಯದಲ್ಲಿ ಹೊತ್ತಿರುವ ದೀಪವನ್ನು ಎಣ್ಣೆ ಬತ್ತಿ ಹಾಕಿ ಪ್ರಜ್ವಲಿಸುತ್ತಿರುವುದು ಜಗದ ಚರಿತ್ರೆಯ ಸ್ತ್ರೀಪರ ಮನಸ್ಸುಗಳು. ಪಿತೃ ಪ್ರಾಬಲ್ಯವು ಮಾತೃ ಮಂದಿರಕ್ಕೆ ಕೊಳ್ಳಿ ಇಡುತ್ತಲೇ ಬದುಕುತ್ತಿರುವುದಕ್ಕೆ ಕಾರಣಗಳನ್ನು ಹುಡುಕುತ್ತ ತಸ್ಲಿಮಾ ದೇಶಾಂತರ ಪರ್ಯಟನೆಯಲ್ಲಿರುವುದು ಸಹಾ ಚರಿತ್ರೆ. ಒಮ್ಮೆ ಲಂಕೇಶ್ ಪತ್ರಿಕೆ ಕನ್ನಡದ ಮಟ್ಟಿಗೆಕಡಲ ತೀರದಲ್ಲಿ ಸಾರಾಅಬೂಬಕರ್, ಹಾಸನ ಮೂಲದಲ್ಲಿ ಭಾನು ಮಸ್ತಾಕ್‍ಅಂತವರ ಕೈಗೆ ದೀಪ ನೀಡಿರುವುದನ್ನು ಇವರುಗಳು ಜೋಪಾನವಾಗಿ ಜತನದಲ್ಲಿರಿಸಿಕೊಂಡಿದ್ದಾರೆ.
    ಭಾನು ಅವರ ಬರಹ ಗಂಡಿನ ಇಬ್ಬಂದಿತನ ಹೇಳುತ್ತಾ ತನ್ನ ಇಸ್ಲಾಂಧರ್ಮದ ಅಪತಿಳುವಳಿಕೆಯನ್ನು ಬೇಸರದಿಂದ ಮೂಡಿಸುತ್ತದೆ.ಅಂದು ಬಿಜಾಪುರದಲ್ಲಿ ಸಿನಿಮಾ ನೋಡಲು ಹೋದಳು ಎಂಬ ನಜ್ಮಾಭಾಂಗಿ ಪ್ರಕರಣಕುರಿತು ಬರೆದು ಲಂಕೇಶ ಪತ್ರಿಕೆಗೆ ಪಾದಾರ್ಪಣವಿಟ್ಟು ಭಾನು ಈಗಲೂ ಹಾಸನದಲ್ಲಿ ಮಸೀದಿಯಲ್ಲಿನ ನಮಾಜಿಗೆ  ಸ್ತ್ರೀಯರ ನಿಷೇಧವನ್ನು ಪ್ರತಿಭಟಿಸಲು ಪ್ರಚೋದಿಸಿ ಸುದ್ದಿಯಲ್ಲಿದ್ದಾರೆ. ಒಳಗಿದ್ದು ಒಳಗೇ ಪ್ರತಿಭಟಿಸುವುದಕ್ಕೆ ಮನದೊಳಗೆ ಪಾರದರ್ಶಕ ಶಕ್ತಿಬೇಕು.ಇದು ಭಾನುಅವರಿಗಿದೆ.
    2. ‘ಇಬ್ಬನಿಯ ಕಾವು’ಪುಸ್ತಕದ (2013) ಲೇಖನಗಳು ತುಂಬಾ ವೈಚಾರಿP Àಮೂಲದವು. ‘ದಿಸ್ಟೋನಿಂಗ್‍ಆಫ್‍ಸುರಯ್ಯ’ ಎಂಬ ಚಲನಚಿತ್ರ ಕುರಿತು ಬರೆಯುವ ಭಾನು ಜಗದ ಚಿಂತಕರ ಪರವಾಗಿ ಎಂಬಂತೆ ಅವರ ಪುಸ್ತಕ ಪ್ರಾರಂಭಿಸುತ್ತಾರೆ. ಲಂಕೇಶ್‍ಕುರಿತು“ಮಾಡಿದ್ದನ್ನು ಅಳಿಸುವ ನಿರಂತರ ಕಡಲ ಅಲೆಗಳ ನಡುವೆ ವಿದಾಯ ಹೇಳದೆ ಹಾರಿ ಹೋದ ಬೇಸಿಗೆ ಹಕ್ಕಿ” ಎಂದು ಭಾನು ಹೇಳುತ್ತಾರೆ. (ಪು:81) ಇವರ ಬರಹಗಳು ಸಮಾಜವನ್ನು ಅದರಲ್ಲೂ ಇಸ್ಲಾಂ ಸಮಾಜವನ್ನು ತೀಕ್ಷ್ಣತೆಗೊಡ್ಡಿ ವಿಮರ್ಶಿಸಬಲ್ಲದು. 800 ವರ್ಷಗಳ ಹಿಂದೆ ಮೆಮುಲುಕ್ ಸುಲ್ತಾನ್ ಮಗಳು ತಾಹೇರ್ ಎಂಬಾಕೆ ಮದರಸಗಳನ್ನು ಸ್ಥಾಪಿಸಿದ್ದಳು.ಜಮ್ರಾದ್ ಎಂಬುವಳು ಕೂಡ ಮದರಸಾ ಸ್ಥಾಪಿಸಿದ್ದಳು. ಈ ಸ್ತ್ರೀ ಸ್ವಾತಂತ್ರಗಳು ಹೇಗೆ ಮಸುಕಾಗುತ್ತಾ ಬಂತುಎಂಬುದನ್ನು ಭಾನು ಅವರು ವಿವರಿಸಿ ಹೇಳುತ್ತಾರೆ. (ಪುಟ 86) ಇದೇಕಾಲಾವದಿಯಲ್ಲಿ ವಚನಕಾರರ ಅಕ್ಕ ಅಲ್ಲಮ ಬಸವಾದಿಗಳ ಸಮ್ಮುಖದಲ್ಲಿ ಅನುಭವ ಮಂಟಪ ಏನೆಲ್ಲಾ ತಿಳುವಳಿಕೆ ನೀಡುತ್ತಿತ್ತು.ಅದು ಹೇಗೆ ಪಲ್ಲಟಗೊಂಡು ಸ್ತ್ರೀಯರ ಬಗ್ಗೆ ಇಬ್ಬಂದಿತನ ಪ್ರಾರಂಭವಾಯಿತು ಎಂದೆಲ್ಲಾ ಇಲ್ಲಿ ಚಿಂತಿಸಲು ನಮಗಿಲ್ಲಿ ಅವಕಾಶವಿದೆ. ಮೊಘಲ್ ಸಾಮ್ರಾಜ್ಯ ನಾಶವಾದ ಅನಂತರದ ಇತಿಹಾಸವು ಒಡೆದು ಆಳುವ ಬಗೆಯಲ್ಲಿ ಏನೆಲ್ಲಾ ಮಾಡಿತು ಎಂಬುದನ್ನು ಭಾನು ಈ ಪುಸ್ತಕದಲ್ಲಿಚಿಂತಿಸುತ್ತಾರೆ. ಎಸ್.ಎಲ್. ಭೈರಪ್ಪನವರನ್ನುಅವರ‘ಆವರಣ’ಮೂಲಕಚರ್ಚೆಗೆಎತ್ತಿಕೊಂಡುಭೈರಪ್ಪನವರು“ಹಳೆಯ ಸೂಟು ಹಳೆಯ ಟೈ ತೊಟ್ಟು ಸಂತೆಯಲ್ಲಿ ನಿಂತು ಗೊಗ್ಗರುಧ್ವನಿಯ ಮೈಕಿನಲ್ಲಿ ಹಲ್ಲುಪುಡಿ ಮಾರುವವನ ಶೈಲಿಯಲ್ಲಿ ಸಿದ್ಧಾಂತದ ಪ್ರಚಾರಕನ ಮಟ್ಟಕ್ಕೆತಮ್ಮನ್ನು ತಾವೇ ಕೆಳಗಿಳಿಸಿಕೊಂಡಿದ್ದಾರೆ” ಎಂಬ ಮಾತನ್ನು ಭಾನು ಹೇಳಿ ಚುರುಕುಮುಟ್ಟಿಸುತ್ತಾರೆ. ತರಾಟೆಗೆ ತೆಗೆದುಕೊಳ್ಳುತ್ತಾರೆ. (ಪು.40) ಇದು ಸಂತೆ, ಜಾತ್ರೆನೋಡಿ ಅನುಭವಿಸಿದ ನಮ್ಮಂತವರಿಗಂತೂ ರೂಪಕವಾಗಿಕಂಡು ಬರುತ್ತದೆ.
    ಪಂಪನು ಬನವಾಸಿ ನೆನವಂತೆ ಯಾವುದೇ ಲೇಖಕ / ಲೇಖಕಿಯರ ಮನಸ್ಸು ತಮ್ಮ ನೆನಪಿನ ಬುತ್ತಿಯಲ್ಲಿ ತನ್ನ ನೆಲವನ್ನು ಜ್ಞಾಪಿಸಿಕೊಳ್ಳುತ್ತದೆ. ಹಾಸನ ದನಗಳ ಜಾತ್ರೆ ಅಲ್ಲಿಯ ಲೇಖಕ/ಲೇಖಕಿಯರಿಗೆ ಅದರೊಳಗಿನ ವಾರ ಹದಿನೈದು ದಿನಗಳು ಸಾಂಸ್ಕøತಿಕ ಸಡಗರದಿಂದ ಶೃಂಗಾರಗೊಳ್ಳುವ ಸಾಂಸ್ಕøತಿಕ ಮೇವು ನೀಡುವ ತಾಣ. ಭಾನು ಅವರು ಜಿಲ್ಲಾ ಹತ್ತನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಭಾಷಣ ಮಾಡುವಾಗ ಈ ನೆನಪುಗಳಿವೆ. (ಪು.29) ‘ಇಷಿಡೋಲ್‍ಮಾಲ್’ಹಾಸನದ ಚಳಿಗೆ ಸ್ವೆಟರ್ ಮಾಡುವ ಟಿಬೆಟ್ ಹುಡುಗಿ. ಊರಲ್ಲಿ ಹುಲಿ ನೆರೂರಲ್ಲಿ ಇಲಿ ಎಂಬುದು ವಾಸ್ತವ. ಚುಡಾಯಿಸುವ ಹುಡುಗರನ್ನು ಹೇಗೆ ನಿಯಂತ್ರಿಸಿ ಕೊಳ್ಳುತ್ತಾಳೆಂಬ ಪ್ರಬಂಧವು ಮನ ಮುಟ್ಟುವಂತೆಇದೆ. (ಪು64) ಆಲೂಗೆಡ್ಡೆ ಸ್ಥಳೀಯರು ಕರೆವಂತೆ“ಗೆಂಡೆ” ಎಂಬ ಬೆಳೆ. ಇದು ಬೆಳೆ ಬಂದರೆ ಕಾಳಿ ಹೋದರೆ ಬೋಳಿ’ ಈ ಕಾಳಿ ಬೋಳಿ ಶಬ್ದಗಳು ಮಾತೃಮೂಲದ ಶಕ್ತಿ ದೇವತೆಯನ್ನು ಆರ್ಯ ಮೂಲದ ಅಸಹಾಯಕಿ ಬೋಳಮ್ಮನನ್ನು ಒಟ್ಟಿಗೆ ನೆನಪು ತರಿಸುತ್ತದೆ. ಇಲ್ಲಿನವರಿಗೆ ಗೆಂಡೆ ಹಾಕುವುದು ಚಟವಾದರೆ ಸಾಬರಿಗೆ ವ್ಯಾಪಾರ ಮಾಡೋದು ಮತ್ತೊಂದು ಚಟ ಹಾಗೂ ವೃತ್ತಿ. ಬೊಂಬಾಯಿ ಕಲ್ಕತ್ತಕ್ಕೆ ವ್ಯಾಗಿನ್ ಗಟ್ಟಳೆ ಮಾಲು ತುಂಬಿಸಿ ಹೋದವರು ನಷ್ಟ ಹೊಂದಿ ಮನೆ ಸೇರದವರಿದ್ದಾರೆ. ಇದುಅಂತರ್‍ರಾಜ್ಯ ಬೆಳೆಯಾದ್ದರಿಂದ ಸೇಠುಗಳದ್ದು ಕಾರುಬಾರು.ಆಲೂಗೆಡ್ಡೆ ಸೀಸನ್ ಬಂದಾಕ್ಷಣ ಅಂಗೈ ಕೆರೆಯಲಾರಂಭಿಸುತ್ತದೆ. ಜಮಾಲ್‍ಎಂಬಾತ ಈ ಚಟದವನು. “ಜೂಜಾಡಲಿಲ್ಲ, ಕುಡಿತದಹಿಂದೆ ಕಳೆಯಲಿಲ್ಲ, ಕುದುರೆ ಬಾಲಕ್ಕೆ ಕಟ್ಟಲಿಲ್ಲ ಎಲ್ಲಿ ಹೋಯಿತು ಅಷ್ಟೆಲ್ಲ ಹಣ ಒಡವೆ ಜಮೀನು?, (ಪು. 68) ಪ್ರಬಂಧವು ಕಡೆಯಲ್ಲಿ ‘ಜಮಾಲ್ ಯಾರೂ ಅಲ್ಲ, ನನ್ನ ಸ್ವಂತ ಸೋದರಮಾವ ಅಂದರೆ ....”ಎಂದು ಅಂತ್ಯಗೊಳ್ಳುತ್ತದೆ.ಪ್ರಬಂಧ ಅದೆಷ್ಟು ಸಹಜ ವಾಸ್ತವಗಳಿಂದ ಕೂಡಿದೆ ಎಂದರೆ ಕಣ್ಣಿಗೆ ಕಟ್ಟಿದಂತಿದೆ.
    ಇದಕ್ಕೆ ವಿಸ್ತರಿಸಿ ಇಲ್ಲಿ ಹೇಳುವುದಾದರೆ ಸೀಗೆ ಗುಡ್ಡದ ಹತ್ತಿರ ಗುಳ್ಳೇನಳ್ಳಿ ಸಾಬರ ಊರು, ಪಕ್ಕದ ವೀರಾಪುರ ನನ್ನ ತಾಯಿ ಊರು. ಹಿಂದೂ ಮುಸಲ್ಮಾನರು ಅಣ್ಣ ತಮ್ಮಂದಿರಂತೆ ಬದುಕೋ ಪರಿಸರ.ಈ ‘ಗೆಂಡೆ’ ಎರಡೂ ಧರ್ಮದವರ ಹಾಸನ ಸುತ್ತಲಿನ ಪ್ರಾಣವಾಗಿತ್ತು.ಈ ಜಮಾಲ್‍ಸಾಬರಂತವರು ಆ ಗೌಡಪ್ಪನಂತೋರು ಎದ್ದುಬಿದ್ದು ಹೀಗೇ ಬದುಕುತ್ತಿದ್ದರು. ಈ ಕೃಷಿ ಬದುಕನ್ನು ಏರಿಸುತ್ತಿತ್ತು. ಇಳಿಸುತ್ತಿತ್ತು. ಇದರೊಳಗೆ ಮತ ಸಹಿಷ್ಣುತೆಎಂಬೋದು ವಿಶ್ವಮಾನವ ತತ್ವದಲ್ಲಿತ್ತು. ಈಗಲೂ ಹಾಗೇ ಇದೆ ಅನ್ನಿ, ಆದರೆ ಪೇಟೆ ಸಂಸ್ಕøತಿ ತುಸು ಅಂತರ ಕಲ್ಪಿಸುವುದುಂಟು. ಇದಾಗಬಾರದು ಎಂಬುದು ಎಲ್ಲರ ಬಯಕೆ.
    ಮೊಘಲ್‍ಚಕ್ರವರ್ತಿ ಷಹಜಹಾನ್ ಮಗ ಸೂಫಿಸಂತ ದಾರಶಿಕೋ ಅವನ ತಮ್ಮ ಔರಂಗಜೇಬನ ಭಯಕ್ಕೆ ಬೆದರಿಜೀವ ಉಳಿಸಿಕೊಳ್ಳಲು ದೆಹಲಿಯಿಂದ ಗುಜರಾತ್‍ವರೆಗೂ ಅಲೆಯುತ್ತಾನೆ. ಪ್ರಭುತ್ವವೆಂಬುದು ನರಭಕ್ಷಕ ಹಸಿದ ಹುಲಿ. ದಾರಶಿಕೋನನ್ನು ಇವನ ಆಪ್ತ ಮಾಲೀಕ ಜೀವನ ಎಂಬುವನು ಔರಂಗಜೇಬನಿಗೆ ಈತನನ್ನು ಒಪ್ಪಿಸಿದ “ 1658ರಲ್ಲಿ ದೆಹಲಿಯ ಬೀದಿಯಲ್ಲಿ ಮಲಿನ ದೇಹ ಚಿಂದಿ ಬಟ್ಟೆಯನ್ನು ತೊಟ್ಟಿದ್ದು ಮಾನಸಿಕವಾಗಿ ಜರ್ಜರಿತನಾಗಿದ್ದ ಹಾಗೂ ಕಬ್ಬಿಣದ ಸಂಕೋಲೆಗಳಿಂದ ಆವೃತ್ತನಾಗಿದ್ದ ದಾರಾಶಿಕೋನನ್ನು ಔರಂಗಜೇಬ್ ಮೆರವಣಿಗೆ ಮಾಡಿಸಿದ. ಅದೇದಿನ ಆತನನ್ನು ನಿರ್ದಯವಾಗಿ ಕೊಲೆಮಾಡಿಸಿದ. ಔರಂಗಜೇಬ ಕೊಟ್ಟ ಕಾರಣ ಆತ ಧರ್ಮ ವಿರೋಧಿ ಎಂಬುದು. (ಪು 113) ಶಿಕೋ ಧಾರ್ಮಿಕ ಸಹಿಷ್ಣುತೆಯ ಜೀವಂತ ಪ್ರತೀಕ.ಇತರೆ ಧರ್ಮಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದ, ಸರ್ವಧರ್ಮ ಸಮತಾಭಾವದ ಸಿದ್ಧಾಂತದವನು. ಆತನ ಪತ್ನಿ ನಾದಿರಾಬೇಗಂ ಪ್ರಯಾಣದ ಸಂಕಷ್ಟದಲ್ಲಿ ಆತನ ತೊಡೆ ಮೇಲೆ ಪ್ರಾಣ ಬಿಟ್ಟಿದ್ದಳು. ಆತ ಏಕ ಪತ್ನಿ ವ್ರತಸ್ಥನಾಗಿದ್ದ.ಆತ ಕಲಾವಿದನಾಗಿದ್ದ. ಹೀಗೆ ‘ಇಬ್ಬನಿಯ ಕಾವು’ ಎಂಬ ಭಾನು ಅವರಪುಸ್ತಕ  ಅನೇಕ ಮಗ್ಗುಲುಗಳ ಅನೇಕ ವಿಚಾರಗಳ ಆಗರವಾಗುತ್ತದೆ.
    ಇಸ್ಲಾಂ ಪೂರ್ವದಲ್ಲಿ ಅರಬ್‍ನಲ್ಲಿ ಹುಟ್ಟಿದ ಹೆಣ್ಣು ಮಕ್ಕಳನ್ನು ಅವಮಾನಕರವೆಂದು ಪರಿಗಣಿಸಿ ಮರಳುಗಾಡಿನಲ್ಲಿ ಜೀವಂತವಾಗಿ ಹೂಳುತ್ತಿದ್ದರು. (ಪು.98) ಹುಟ್ಟಿದ ಹೆಣ್ಣು ಮಗುವಿಗೆ ಭತ್ತವನ್ನು ಹಾಲಿನೊಡನೆ ನುಂಗಿಸಿ ಕೊಲ್ಲುತ್ತಿದ್ದರೆಂದು ತಮಿಳುನಾಡಿನಲ್ಲಿ ದಾಖಲೆ ನಮಗೆ ಸಿಗುತ್ತವೆ. ಅಷ್ಟೆ ಏಕೆ ಹೆಣ್ಣು ಎಂದು ಗೊತ್ತಾದ ಕೂಡಲೆ ಭ್ರೂಣವನ್ನೆ ತೆಗೆಸುವ ಮೈಯಿಳಿಸುವ, ಹುಟ್ಟಿದಾಕ್ಷಣ ಮಗು ಹೆಣ್ಣೆಂದು ಗೊತ್ತಾದರೆ ಹೆದರಿದ ತಾಯಿಯೇ ಕತ್ತು ಹಿಸುಕಿ ಕೊಲ್ಲುವ ದಾರುಣ ಸ್ಥಿತಿ ವರ್ತಮಾನದ ಸಮಾಜದಲ್ಲುಂಟು. ಇದಕ್ಕೆಲ್ಲ ಮಹಿಳೆಯರಿಗೆ ವಿದ್ಯಾಭ್ಯಾಸ, ಉದ್ಯೋಗದ ಅವಕಾಶವೇ ದಾರಿಎಂದು ಲೇಖಕಿ ಪ್ರತಿಪಾದಿಸಿ ಹೇಳುತ್ತಾರೆ.
    ಭಾನು ಅವರ ಈ ಪುಸ್ತಕದ ಪ್ರಸ್ತಾವನೆಯಲ್ಲಿ ಹೇಳುವ ಕೋಗಿಲೆಯ ಕತೆ ಇವರ ಇಡೀ ಬರಹಕ್ಕೆ ರೂಪಕವಾಗಿ ಬರುತ್ತದೆ. ಕನಸುಗಣ್ಣಿನ ಚೆಲುವೆಯ ಸಾಂಗತ್ಯಕ್ಕೆ ಬರುವ ಕೋಗಿಲೆ ಅದು ಪ್ರೇತಕಾಟ ಎಂದು ಸುದ್ದಿ ಹಬ್ಬಿಸಲಾಯಿತು.ಕೋಗಿಲೆಯನ್ನು ಸೆರೆಹಿಡಿದುಅನಂತರಆಕೆಯನ್ನು ಬೇರೆ ದೇಶದವನಿಗೆ ಮದುವೆ ಮಾಡಲಾಯಿತು.ಇದು ಜಗದ ಹೆಣ್ಣುಗಳಿಗೆ ಒದಗಿರುವಇಬ್ಬಂದಿತನ. ಅದರಲ್ಲೂ ಇಸ್ಲಾಂ ಧರ್ಮದಲ್ಲಿ ಕೋಗಿಲೆಯನ್ನು ಒರಟು ಕೈಗಳಲ್ಲಿ ಹಿಡಿಯುವುದು ವರ್ತಮಾನದಲ್ಲೂ ನಿಂತಿಲ್ಲ. ಇದು ನಿಲ್ಲಬೇಕು.ಇಂಪಾದದನಿ ಪ್ರಕೃತಿಯೊಡನೆಒಂದಾಗಬೇಕೆಂಬುದೇ ಭಾನು ಅಂತರಂಗದ ಬಯಕೆ. ‘ಇಬ್ಬನಿಯ ಕಾವು’ ಇಂತಹ ಹದಿನೈದು ಲೇಖನಗಳ ಸಾರ.
    ಭಾನು ಅವರ ಕಥೆಗಳಲ್ಲಿ ಮುಸ್ಲಿಂ ಸಮಾಜದ ಪ್ರಗತಿಪರ ಚಿಂತನೆಗಳು ಅಸಹಾಯಕತೆಯ ಮನಸ್ಸುಗಳ ಹುಡುಕಾಟದ ದಾರಿಯಲ್ಲಿದ್ದರೆ ಅವರ ಪ್ರಬಂಧಗಳಲ್ಲಿ ಪ್ರಗತಿಪರ ಚಿಂತನೆಗಳು ಕಾವಾಗುತ್ತವೆ. ಅವು ಇಬ್ಬನಿಯ ಕಾವು. ಎಳೆ ಬಿಸಿಲಿನ ಆರೋಗ್ಯಕರ ವಿಟಮಿನ್‍ಗಳ ಬಯಕೆಯವು. ಉರ್ದು ಶಾಲೆಗೆ ಸೇರಿದ ಭಾನುವಿಗೆ ಉರ್ದುತಲೆಗೆ ಹತ್ತದೆ ಕನ್ನಡಕ್ಕೆ ಪಕ್ಷಾಂತರಗೊಂಡು ತಮ್ಮ ಸೃಜನಶೀಲ ಬರವಣಿಗೆಯನ್ನು ಅಡವಿಯೊಳಗಿನ ಪಕ್ಷಿ ಭಾಷೆಯೋ ಎಂಬಂತೆ ಮಧುರಗೊಳಿಸಿದ ರೀತಿ ಅವರ ಶೈಲಿಯಲ್ಲಿ ಕಾಣುತ್ತದೆ. ಇದು ಚಪ್ಪಾಳೆ ತಟ್ಟುವ ಪುಟ್ಟ ಮಗುವಿನ ಭಾಷೆ. ಇದು ಬಹುಶಃ ಕನ್ನಡದಲ್ಲಿ ಬರೆಯುವ ಎಲ್ಲಾ ಮುಸ್ಲಿಂ ಬರವಣಿಗೆಯವರಿಗೂ ಅನ್ವಯಿಸುವುದಲ್ಲವೆ! ಉರ್ದುಕುರಿತು ನಮ್ಮ ಹಿರಿಯರು ‘ಭಾಷೆಮಾತು’ ಎಂದುಕರೆಯುತ್ತಿದ್ದರು. ಉರ್ದುವಿಗೂ ಕನ್ನಡಕ್ಕೂ ಇರುವ ಅವಿನಾವಭಾವ ಸಂಬಂಧ ಇಂತದಾಗಿರಬಹುದು! ಹಾಸನ ಸೀಮೆಯಲ್ಲೀಗ ಸ್ತ್ರೀದನಿಗಳು ಸೃಜನಗೊಂಡು ಭಾನು, ರೂಪಾ, ತೇಜಶ್ರೀ, ಶೈಲಜಾ, ಕುಸುಮ ಹೀಗೆ ಪಲ್ಲವಿಸುತ್ತಿವೆ. ಇದು ಪ್ರಗತಿಪರ ಸಾಮಾಜಿಕ ತಿರುವು. ಪ್ರಕೃತಿದೇವಿ ಹಾಸನಮ್ಮ ಹಾಗೂ ಸೃಜನಗೊಂಡ ಶಾಂತಲೆಯ ಸ್ವರೂಪಗಳ ಸಂಗಮವಿದು.





No comments:

Post a Comment