Monday 4 August 2014

                £À¢AiÀiÁzÀ¼ÀÄ

ಅನು ದಿನವೂ ತೀರಾ ಸನಿಹದಲ್ಲಿ
ಮೈಗೆ ಮೈ ತಾಕುವಷ್ಟು ಬಾಂಧವ್ಯದಲಿ     
ನಡೆದು ಬಂದೆಯಲ್ಲಾ ನನ್ನ ದಡಗಳ          
ನಿರ್ದೇಶಿಸುವುದೇ ನಿನ್ನ ಕಾಯಕವಾಗಿ

ಹೊರಳಿ,ಚಿಮ್ಮಿ ಬಳುಕುತ್ತಾ ಸಾಗುವ  
ನನ್ನ ದಂಡೆಗಳೆದುರು ನಿನ್ನ ಹೆಜ್ಜೆಗಳು
ಹೊಳೆಯುವ ಹೊನ್ನಿನ ಮರಳನ್ನು
ಕೆಸರನ್ನಾಗಿಸಿದರೂ ನನ್ನ ಹರಿವಿಗೆ
ಅಸಂಗತ ಇಬ್ಬನಿಯ ಕಟ್ಟೆ!

ಕಶ್ಮಲದ ಕೂಟವನು ನನಗಂಟಿಸಿ
ಒಡಲಿನ ಮುತ್ತು –ರತ್ನಗಳ ದೋಚಿದವನೇ
ಒಗರು ,ಒಣಪೊಗರುಗಳ ನಂಜಿನಲಿ
ತಿರುಪೆಗಿಳಿದ ಹರಿದ ಜೋಳಿಗೆಯವನೇ
 ಉಕ್ಕಿದ ಕಡಲು ನೊರೆಯಾಯಿತೇ

ನಿನ್ನ ಹೆಜ್ಜೆ ಸೋಲಬಹುದು
ನನ್ನ ದಡಗಳ ಮಹಾರಾಣಿ
ನಾನೇ . ನನ್ನ ಒಳ ಒರತೆಗಳ
ಸುಳಿವು ಕೂಡಾ ಸಿಗದು ನಿನಗೆ

ಹೆಸರುಗಳ ನೀಡಿ ನನ್ನ ದೂಷಿಸಿ
ಗ್ರಂಥಗಳ ರಚಿಸಿ ಬಿರುದು ಸಮ್ಮಾನ
ಪಡೆಯುವಾತನೇ ನನ್ನ ಪಾತ್ರದ ಅಂಕು
 ಡೊಂಕುಗಳ  ಹರಿವ ಜೀವ ಚೈತನ್ಯದ
 ಎಲ್ಲೆ ನಿನ್ನ ಅರಿವಿಗೆ ನಿಲುಕದು

ಪ್ರೀತಿಯನು ಅಭಿನಯಿಸಿದೆ ಉಳಿಯೊಂದೇ
ಉಳಿಯಿತು ಕೈಯಲಿ ಅಂತರಂಗದಲಿ
ನನ್ನ ಮೂರ್ತಿ ಕಡೆಯುವ ಕಾಯಕದಲಿ
 ನಿನ್ನ ಸೀಳುಗಳ ಮರೆತೆ  ಕತ್ತಲೆಯಂತೆ

ಪ್ರೀತಿಯಲಿ ನೀನು ತೊಡಿಸಿದ ಬಂಗಾರದ
ಬೇಡಿಗಳು ನಿನಗೇ ಇರಲಿ ,ಹುಸಿ ಪ್ರೀತಿಯನು
ಕೂಡಾ ತೋರಲು ಬಾರದವನೇ ನನ್ನ ದಡಗಳ
ಅಸೀಮತೆಯೆದುರು ದಿಕ್ಕೆಟ್ಟ ಅನಾಮಿಕ ದಾರಿಹೋಕನೇ

ನೋಡಿಲ್ಲಿ. . ..  .

ನದಿಮೂಲದ ನಿಗೂಢತೆಯಲಿ ಸದ್ದಿಲ್ಲದಹೆಜ್ಜೆ
ಯೊಡನೆ ಹೊಸಪಾತಳಿಯ ಹೆದ್ದಾರಿಯನು
ಅದರೊಳಗೆ ಹೂ ಕಣಿವೆಯನು ಬೆಸೆದು
ಸಂಬಂಧದ ಸೆಲೆಯ ಬೆರಗನಿಲ್ಲಿ ಇಡುವೆ
ಕಾಮನ ಬಿಲ್ಲಿಗೆ ಕಣ್ಣ ಹರವಿನಲಿ ಆಮಂತ್ರಣ ನೀಡುವೆ







No comments:

Post a Comment